Home    Tour    Health    Music    Quote    Story    Joke


Part 111 - kannada Jokes , Fun , Haasya , Humor , Quotes , Greetings

ಹೆಂಡತಿ - ರೀ ಒಂದ್ ವಿಷ್ಯ ಹೇಳ್ತೀನಿ ಹೊಡೀಬಾರ್ದು.☺😉
ಗಂಡ - ಹೇಳು ಚಿನ್ನ.😘
ಹೆಂಡತಿ - ಹೊಡೆಯಲ್ಲ ಅಂತ ಭಾಷೆ ಕೊಡಿ.😔
ಗಂಡ - ಆಯ್ತು ಹೊಡೆಯಲ್ಲ. ಹೇಳು☺. ಹೆಂಡತಿ - ಈಗ ನನಗೆ ಮೂರು ತಿಂಗಳು.😄😍 ಗಂಡ - ಅಯ್ಯೋ ಪೆದ್ದಿ ಇಂಥ ಒಳ್ಳೆ ವಿಷಯಕ್ಕೆ ಯಾರಾದರೂ ಹೊಡೀತಾರ?😳 ಹೆಂಡತಿ - ಹಾಗಲ್ಲ. ರೀ ನಾನು ಕಾಲೇಜ್ ಗೆ ಹೋಗೋವಾಗ ಈ ವಿಷಯ ಹೇಳಿದ್ದಕ್ಕೆ ನಮ್ಮಪ್ಪ ಹಿಡ್ಕೊಂಡು ನಾಯಿಗೆ ಹೊಡ್ದಂಗೆ ಹೊಡ್ದ 😔😪😪😪😥 😜😁😁😂😂😂 ಟೀಚರ್👸: ಯಾಕೋ ಗುಂಡ ಬೇರೆಯವರ ಪೇಪರ್ ನೋಡಿ ಉತ್ತರ ಬರೀತಿಯಲ್ಲ . . ನಾಚಿಗೆ ಆಗಲ್ವಾ ನಿಂಗೆ. . ? ಗುಂಡ 👱: ಯಾರೊ ಬರೆದ ಪುಸ್ತಕ ನೋಡಿ ಪಾಠ ಮಾಡ್ತಿರಲ್ಲ . ನಿಮಗೆ ನಾಚಿಕೆ ಆಗೊಲ್ವಾ ಸರ್ ?😂😂 ಮೇಷ್ಟ್ರು: ಶಾಂತಿಯಿಂದ ಮಾತ್ರ ನಮ್ಮ ದೇಶ ಕಟ್ಟಲು ಸಾಧ್ಯ. ಗುಂಡ: ಸುಮ್ಕಿರಿ ಮೇಷ್ಟ್ರೇ ಶಾಂತಿಗೆ ನೆಟ್ಟಗೆ ಹೂ ಕಟ್ಟಕ್ಕೇ ಬರಕ್ಕಿಲ್ಲ ಇನ್ ದೇಶ ಹೆಂಗ್ ಕಟ್ಟಾಳು.😊😂 ಗುಂಡ ಬಸ್ ಸ್ಟೇಶನ್ ಮುಂದೆ ಸೂಸು ಮಾಡುತ್ತಿದ್ದ. ಪೊಲೀಸ್ : ಲೇ ಹುಡುಗ, ಇಲ್ಲಿ ಸೂಸು ಮಾಡಬಾರದು, ಮಾಡಿದ್ರೆ ಹಿಡ್ಕೊಂಡು ಹೋಗ್ತೀನಿ. ಗುಂಡ : ಹಿಡ್ಕೊಂಡು ಹೋಗಿ ಸಾರ್, ಸುಮ್ನೆ ವೇಸ್ಟ್ ಆಗ್ತಿದೆ! 😀😂😂 ಮನೆಯ ಬಾಗಿಲನ್ನು ಕಿತ್ತು ಹೆಗಲ ಮೇಲಿಟ್ಟುಕೊಂಡು ಹೊರಟಿದ್ದ ರಂಗ ನಿಂಗ :- ಏನೋ ರಂಗ ಇದು ಹೊಸ ವ್ಯಾಪಾರ? ರಂಗ :- ಹಾಗೇನಿಲ್ಲಪ್ಪ ಬೀಗ ತೆಗೆಸಬೇಕು. ಕೀಲಿ ಕಳೆದು ಹೋಗಿದೆ. ನಿಂಗ :- ಎಂಥಾ ಯಬಡೇಶಿ ಇದಿಯೋ, ಮನೆಗೆ ಯಾರಾದರೂ ಕಳ್ಳರು ನುಗ್ಗಿದರೆ ಎನ್ ಮಾಡ್ತೀಯಾ? ರಂಗ:- ಅದ್ಹೆಂಗ್ ನುಗ್ತಾರೆ? ಬಾಗಿಲು ನನ್ನ ಹತ್ರಾನೇ ಇದೆ!!!!!!!😜😜😜 Teacher :- ಒಂದು ವೇಳೆ ನಿನ್ನ Girl friend ಮತ್ತು best friend ಒಂದು ಚಿಕ್ಕ ದೋಣಿಯಲ್ಲಿ ಮುಳುಗುತ್ತಿದ್ದರೆ, ನೀನು ಯಾರನ್ನು ಕಾಪಾಡ್ತೀಯಾ...? Student:- ಇಬ್ರೂ ಸಾಯ್ಲೀ! ಯಾರನ್ನೂ ಕಾಪಾಡೋಲ್ಲ...😡 Teacher :- ಯಾಕೆ...😳? Student:- ಒಂದೇ ದೋಣೀಲಿ ಇಬ್ರಿಗೂ ಏನು ಕೆಲಸ...?!!! 😛😝😝😆😘


*********

To all the married ones:
"The radius of Wi-Fi is Limited

But the

The radius of Wife~Eye is  Unlimited"

Have a safe Navaratri... Don't Mess with your personal Durga devi.
😂😁😉😜😂

**********

     *ಒಂದು ಸುಂದರ ವಿಶ್ವ*

*ಅಮ್ಮ*.. ನಿನ್ನನ್ನು ಪ್ರಪಂಚಕ್ಕೆ ಪರಿಚಯಿಸುತ್ತಾಳೆ
*ಅಪ್ಪ*..ಪ್ರಪಂಚವನ್ನು ನಿನಗೆ ಪರಿಚಯಿಸುತ್ತಾನೆ.

ಜೀವ.. *ಅಮ್ಮ*ನದು.
ಜೀವನ.. *ಅಪ್ಪ*ನದು.

ಹಸಿವೆ ತಿಳಿಯದಂತೆ *ಅಮ್ಮ* ನೋಡುತ್ತಾಳೆ.
ಹಸಿವಿನ ಬೆಲೆಯನ್ನು *ಅಪ್ಪ* ತಿಳಿಸುತ್ತಾನೆ.

*ಅಮ್ಮ* ಭದ್ರತೆಯಾದರೆ..
*ಅಪ್ಪ* ಬಾಧ್ಯತೆಯಾಗುತ್ತಾನೆ..

ಬೀಳದಂತೆ ಹಿಡಿಯಬೇಕೆಂದು *ಅಮ್ಮ* ನೋಡುತ್ತಾಳೆ..
ಬಿದ್ದರೂ ಮೇಲೆ ಏಳಬೇಕೆಂದು *ಅಪ್ಪ* ಹೇಳುತ್ತಾನೆ..

ನಡೆಸುವದು *ಅಮ್ಮ*ನಾದರೆ..
ನಡವಳಿಕೆ *ಅಪ್ಪ*ನಿಂದ..

ತನ್ನ ಅನುಭವಗಳನ್ನು ವಿದ್ಯೆಯಂತೆ ಬೋಧಿಸುತ್ತಾಳೆ *ಅಮ್ಮ*..
ನಿನ್ನ ಅನುಭವವೇ ವಿದ್ಯೆ ಎಂದು ತಿಳಿಸುವಂತೆ ಮಾಡುತ್ತಾನೆ *ಅಪ್ಪ*..

*ಅಮ್ಮ* ಆಲೋಚನೆಯಾದರೆ..
*ಅಪ್ಪ* ಆಚರಣೆ..

*ಅಮ್ಮ*ನ ಪ್ರೇಮವನ್ನು ನೀನು ಹಸುಳೆ ಇರುವಾಗಲೇ ತಿಳಿದು ಕೊಳ್ಳುತ್ತೀಯಾ..

ಅದರೆ...

*ಅಪ್ಪ*ನ ಪ್ರೇಮವನ್ನು ತಿಳಿದು ಕೊಳ್ಳುವದು ನೀನೊಬ್ಬ ಹಸುಳೆಯ ತಂದೆ ಅದಾಗಲೇ..
💐💐💐💐💐💐💐💐💐

***********

ಭಿಕ್ಷುಕ  : ಮಗ ತಿನ್ನಲಿಕ್ಕೆ  ಏನಾದರೂ ಕೋಡು,

ಗುಂಡ : ನಿನಗೆ ಕೊಟ್ಟ್ರೆ ನನಗೆ ಏನು ಸಿಗುತ್ತೆ

ಭಿಕ್ಷುಕ : ನಿನಗೆ ಸ್ವರ್ಗ ಸಿಗುತ್ತೆ,

ಗುಂಡ : ನಿಂಗೆ ಬೆಂಗಳೂರು ಕೊಡುತ್ತಿನಿ,

ಭಿಕ್ಷುಕ : ಬೆಂಗಳೂರು ಏನು ನಿಂದಾ,

ಗುಂಡ : ಮತ್ತೆ ಸ್ವರ್ಗ ಏನು ನಿಮ್ಮಪ್ಪಂದಾ,😆😆😂😂😂😆😂😂😃😃😆😂

*********

ಅಪ್ಪನ ಬಗ್ಗೆಯೂ ನಾಲ್ಕು ಮಾತುಗಳು.
-----------------------

ನಿತ್ಯವೂ ನಮಗಾಗಿ ಅಡಿಗೆ ಮಾಡುವ ಅಮ್ಮನ ನೆನಪು ನಮಗೆ ಸದಾ ಇರುತ್ತದೆ.

ಆದರೆ,

ಜೀವನದುದ್ದಕ್ಕೂ ನಮ್ಮ ಊಟಕ್ಕಾಗಿ ವ್ಯವಸ್ಥೆ ಮಾಡುತ್ತಿರುವ ಅಪ್ಪನನ್ನು ಮರೆಯುತ್ತೇವೆ!

ಅಮ್ಮ ಅಳಬಹುದು. ಆದರೆ ಅಪ್ಪನಿಗೆ ಅಳಲು ಸಾಧ್ಯವಾಗುವದಿಲ್ಲ. ಸ್ವಯಂ ಅವನ ಅಪ್ಪನೇ ಕಾಲವಾದರೂ ಸಹ ಅವನಿಗೆ ಅಳುವುದು ಸಾಧ್ಯ ಆಗುವದಿಲ್ಲ. ಏಕೆಂದರೆ, ಅವನು ತನ್ನ ಚಿಕ್ಕ ಚಿಕ್ಕ ತಮ್ಮಂದಿರ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. 

ಅಪ್ಪ ತನ್ನ ತಾಯಿಯನ್ನು ಕಳದುಕೊಂಡಾಗಲೂ ಅಳುವದಿಲ್ಲ. ಏಕೆಂದರೆ, ಅವನ ಅವಿವಾಹಿತ ತಂಗಿಯರಿಗೆ ಆಸರೆಯಾಗಬೇಕಾದ ಹೊಣೆಗಾರಿಕೆ ಅವನಿಗಿದೆ.

ತನ್ನ ಹೆಂಡತಿಯೇ ಅವನನ್ನು ಬಿಟ್ಟು ಹಿಂದಿರುಗದ ದಾರಿಗೆ ಹೋದರೂ ಅಪ್ಪ ಅಳುವದಿಲ್ಲ.

ಏಕೆಂದರೆ,

ಮಕ್ಕಳನ್ನು ಸಂತೈಸಬೇಕಾಗಿರುತ್ತದೆ.

ದೇವಕಿ ಮತ್ತು ಯಶೋದೆಯರ ಗುಣಗಾನ ಮಾಡಲೇಬೇಕು.

ಆದರೆ,

ನದಿಯಲ್ಲಿ ತುಂಬಿದ ನೆರೆಯ ಅಬ್ಬರದಲ್ಲಿ, ತಲೆಯ ಮೇಲೆ ಬುಟ್ಟಿ ಹೊತ್ತುಕೊಂಡು ನಡೆದ ವಸುದೇವನನ್ನು ಮರೆಯಬಾರದಲ್ಲವೇ?

ಶ್ರೀರಾಮನು ನಿಶ್ಚಯವಾಗಿಯೂ ಮಾತೆ ಕೌಸಲ್ಯೆಯ ಪುತ್ರನೇ ಆದರೂ, ರಾಮನ ಅಗಲುವಿಕೆಯ ಕಾರಣ, ಮಿಡುಕಾಡಿ ಪ್ರಾಣತ್ಯಾಗ ಮಾಡಿದವನು ದಶರಥನೇ ತಾನೇ?

ಅಪ್ಪನ ಚಪ್ಪಲಿಯ ಉಂಗುಷ್ಟ ಕಿತ್ತು ಹೋಗಿದ್ದು ಕಂಡಾಗ ಅವನ ಪ್ರೀತಿಯ ಆಳದ ಅರಿವಾಗುತ್ತದೆ.

ಅಪ್ಪನ ತೂತಾದ, ಹರಕು ಒಳ-ಅಂಗಿಯನ್ನು ಗಮನಿಸಿದಾಗ, ಅವನು ನಮ್ಮ ಭಾಗ್ಯದಲ್ಲಿನ ದೋಷಗಳನ್ನು ತಾನೇ ತೆಗೆದುಕೊಂಡಿದ್ದಾನೆಂದೇ ಅನಿಸುತ್ತದೆ. 

ಮಗಳಿಗೆ ಸುಂದರ ಉಡುಗೆ ತಂದುಕೊಡುತ್ತಾನೆ, ಮಗನಿಗೆ ಉತ್ತಮ ದರ್ಜೆಯ  ಟ್ರ್ಯಾಕ್ ಸೂಟ್ ಕೊಡಿಸುತ್ತಾನೆ, ಆದರೆ, ತಾನು ಮಾತ್ರ ಹಳೆಯ ಇಜಾರ ಧರಿಸುತ್ತಾನೆ.

ಮಗನು ಕೇಶಕರ್ತನಕ್ಕೆ ೫೦ ರೂ. ಖರ್ಚು ಮಾಡುವುದನ್ನು, ಹಾಗೂ ಮಗಳು ಕೇಶ-ವದನ ಶೃಂಗಾರ ಗೃಹಕ್ಕೆ ಭೇಟಿ ನೀಡುವದನ್ನು, ಅಂತೆಯೇ ಮುಖಕ್ಷೌರ ಮಾಡಲು ಕ್ಷೌರಸಾಬೂನು ಇಲ್ಲದೇ ಹೋದಾಗ ಸ್ನಾನದ ಸಾಬೂನನ್ನೇ ಬಳಸುವ ಅಪ್ಪಂದಿರನ್ನೂ ನೀವು ಕಂಡಿರಬಹುದು!

ಅಪ್ಪನ ಆರೋಗ್ಯ ಕೆಡುವದೇ ಇಲ್ಲ.
ಅಕಸ್ಮಾತ್ತಾಗಿ ಅನಾರೋಗ್ಯ ಆದರೂ ಸಹ, ಅವನು ತಕ್ಷಣಕ್ಕೆ ಆಸ್ಪತ್ರೆಗೆ ಹೋಗುವುದೇ ಇಲ್ಲ.
ವೈದ್ಯರು ಒಂದರ್ಧ ತಿಂಗಳ ವಿಶ್ರಾಂತಿ ಪಡೆಯಲು ಸಲಹೆ ನೀಡಿದರೆ, ಅವನ ಹಣೆಯ ಮೇಲಿನ ನಿರಿಗೆಗಳು ಆಳವಾಗುತ್ತವೆ.

ಏಕೆಂದರೆ,

ಅವನಿಗೆ ಮಗಳ ಮದುವೆ ಮಾಡಬೇಕಿದೆ.

ಮಗನ ವಿದ್ಯಾಭ್ಯಾಸ ಇನ್ನೂ ಅಪೂರ್ಣವಾಗಿದೆ.

ಸಾಕಷ್ಟು ವರಮಾನವಿಲ್ಲದಿದ್ದರೂ, ಮಗ/ಮಗಳ ವೈದ್ಯಕೀಯ/ತಾಂತ್ರಿಕ ಶಿಕ್ಷಣಕ್ಕೆ ಪ್ರವೇಶ ಮಾಡಿಸಬೇಕಿದೆ.

ಹೇಗಾದರೂ ಮಾಡಿ ಹಣವನ್ನು ಹೊಂದಿಸಿಕೊಂಡು ಮಗನಿಗೆ ಪ್ರತಿ ತಿಂಗಳೂ ಮಗನಿಗೆ ಕಳಿಸಬೇಕು. (ಅದೇ ಮಗನು ಕೈಗೆ ಹಣ ಸಿಕ್ಕಿದ ಕೂಡಲೇ ತನ್ನ ಗೆಳೆಯರ ಗುಂಪಿಗೆ ಔತಣ ನೀಡುತ್ತಾನೆ!)

ಯಾವುದೇ ಒಂದು ಪರೀಕ್ಷೆಯ ಪರಿಣಾಮ ಬಂದಾಗ ನಮಗೆಲ್ಲ ಅಮ್ಮ ಪ್ರೀತಿಪಾತ್ರಳಾಗಿ ತೋರುತ್ತಾಳೆ. ಏಕೆಂದರೆ, ಅವಳು ನಮ್ಮನ್ನು ಹೊಗಳುತ್ತಾಳೆ, ಮುದ್ದು ಮಾಡುತ್ತಾಳೆ ಹಾಗೂ ನಮ್ಮ ಗುಣವನ್ನು ಕೊಂಡಾಡುತ್ತಾಳೆ.

ಆದರೆ,


ಸದ್ದಿಲ್ಲದಂತೆ ಹೋಗಿ ಸಿಹಿತಿನಿಸಿನ ಪೊಟ್ಟಣವನ್ನು ತೆಗೆದುಕೊಂಡು ಬರುವ ಅಪ್ಪ ಮಾತ್ರ ಕೆಲವೊಮ್ಮೆ ಹಿನ್ನೆಲೆಯಲ್ಲಿಯೇ ಉಳಿದು ಬಿಡುತ್ತಾನೆ.

ಮೊದಲಬಾರಿಗೆ ತಾಯಿಯಾದ ಮೇಲೆ ಅಮ್ಮನಿಗೆ ಬಹಳೇ ಸನ್ಮಾನ-ಸತ್ಕಾರ ದೊರಕುತ್ತದೆ. 

ಕಾಳಜಿಪೂರ್ವಕವಾಗಿ ನೋಡಿಕೊಳ್ಳಲಾಗುತ್ತದೆ. (ಇದು ಯೋಗ್ಯ ಹಾಗೂ ಸ್ವಾಭಾವಿಕವೂ ಹೌದು. ಏಕೆಂದರೆ, ಅದಕ್ಕಾಗಿ ಅವಳು ಬಹಳಷ್ಟು ಕಷ್ಟಗಳನ್ನು ಸಹಿಸಿರುತ್ತಾಳೆ.)

 ಆದರೆ,

ಆಸ್ಪತ್ರೆಯ ಹಜಾರದಲ್ಲಿ, ಆತಂಕದಿಂದ ಆಚೆ-ಈಚೆ ಸುತ್ತಾಡುವ,

ಹೊಂದಾಣಿಕೆ ಆಗುವ ಗುಂಪಿನ ರಕ್ತದ ಬಗ್ಗೆ ಚಿಂತಿಸುವ,

ಔಷಧಿಗಳ ಸಲುವಾಗಿ ಅತ್ತಿತ್ತ ಓಡಾಡುವ ಅಸಹಾಯಕ ಅಪ್ಪನನ್ನು ಎಲ್ಲರೂ ಉಪೇಕ್ಷೆ ಮಾಡುತ್ತಾರೆ.

ಪೆಟ್ಟು ತಗಲಿದಾಗ ಅಥವಾ ಸ್ವಲ್ಪ 
ಪ್ರಮಾಣದ ಬೆಂಕಿಯ ಉರಿ ತಗಲಿದರೂ, ಓ ಅಮ್ಮಾ ಎಂಬ ಉದ್ಗಾರ ಬಾಯಿಂದ ಹೊರಬೀಳುತ್ತದೆ.

ಆದರೆ,

ನಮ್ಮ ಪಕ್ಕದಲ್ಲಿ ಅತೀ ಸನಿಹದಲ್ಲೇ ಒಂದು ಭಾರೀವಾಹನ ಸವರಿಕೊಂಡು ಹೋದರೆ ಅರೇ (ಅಯ್ಯಯ್ಯಪ್ಪಾ) ಎಂದು ನಮ್ಮ ಬಾಯಿಂದ ಹೊರಡುತ್ತದೆ.

ವಿಶ್ವದ ಸಕಲ ಅಪ್ಪಂದಿರಿಗೆ ಸಮರ್ಪಿತ.


ಗೆಳೆಯರೇ, ಈ ಬರಹ ನಿಮಗೆ ಇಷ್ಟವಾದರೆ ಮರೆಯದೇ ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ.

*********

Knowledge should be gained through minute by minute efforts. Money should be earned utilizing each and every resource. If you waste time, how can you get knowledge. If you waste resources, how can you accumulate the wealth.

*********

No comments:

Post a Comment

Share your comments here !!

Related Posts Plugin for WordPress, Blogger...