Home    Tour    Health    Music    Quote    Story    Joke


Part 104 - Jokes , Fun , Haasya , Humor , Quotes , Greetings


ಹಾಯ್ ಹುಡುಗಿಯರನ್ನು ಪ್ರಪೋಸ್ ಮಾಡೋದಕ್ಕೆ ಒಳ್ಳೆಯ ದಿನ ಯಾವುದು ಗೊತ್ತಾ?
ಗೊತ್ತಿಲ್ವಾ ನಾನೇ ಹೇಳ್ತಿನಿ...
ಏಪ್ರಿಲ್ 1. ಯಾಕೆ ಮೂರ್ಖರಾಗೋದಕ್ಕಾ ಅನ್ನಬೇಡಿ ಹುಡುಗಿಗೆ ಐ ಲವ್ ಯೂ ಅಂತ ಅನ್ನಿ ಹುಡುಗಿ ಒಪ್ಪಿ ಕೊಂಡರೆ ನಿಮ್ಮ ಅದೃಷ್ಟ ಒಪ್ಪಿಲ್ಲ ಅಂದರೆ ಏಪ್ರಿಲ್ ಪೂಲ್ ಅಕ್ಕ ಅಂತ ಹೇಳಿ ಬಚಾವ್ ಆಗಿ. 😀😀😀😀😀😀 ಒಂದು ಕಾರನ್ನು ಹರಾಜಿಗೆ ಕೂಗುತ್ತಿದ್ದರು. 1 ಲಕ್ಷ, 2 ಲಕ್ಷ, 3 ಲಕ್ಷ... ಗಾಬರಿಗೆ ಬಿದ್ದ ನಾರಾಯಣ ಅಂಥದ್ದೇನಿದೆ ಈ ಕಾರಿನಲ್ಲಿ ಎಂದು ಅಮಾಯಕವಾಗಿ ಪ್ರಶ್ನಿಸಿದ. ಇದು 5 ಬಾರಿ ಆಕ್ಟಿಡೆಂಟ್ ಮಾಡಿದೆ. ಒಂದೊಂದು ಆಕ್ಸಿಡೆಂಟ್ ಆದಾಗಲೂ ಕೇವಲ ಹೆಂಡತಿ ಮಾತ್ರ ಸತ್ತಿದ್ದಳು. ನಾರಾಯಣ ಮರುಮಾತನಾಡದೆ 8 ಲಕ್ಷ ರೂ.ಗೆ ಈ ಕಾರು ನನಗಿರಲಿ ಎಂದ. 😜😜😜😜😜😜 ಶಿಷ್ಯ : ಗುರುಗಳೆ ನೀವು ಬರೆದ ಪುಸ್ತಕ ನನಗೆ ದಾರಿ ದೀಪ ಆಯಿತು ಗುರುಗಳು : ಅದು ಹೇಗೊ ಶಿಷ್ಯ : " ನೆನ್ನೆ ರಾತ್ರಿ ದಾರಿಲ್ಲಿ ಬರಬೇಕಾದರೆ ಬೀದಿ ದೀಪಗಳಿರಲಿಲ್ಲ ನಿಮ್ಮ ಪುಸ್ತಕಕ್ಕೆ ಬೆಂಕಿ ಹಚ್ಚಿ ದೀಪ ಮಾಡಿಕೊಂಡೆ " 😃😃😃😃😃😃 ದ್ವಿ ಚಕ್ರ ವಾಹನದಲ್ಲಿ ನಾಲ್ಕು ಜನ ಹುಡುಗರು ಹೋಗುತಿದ್ದರು ಅವರನ್ನ ತಡೆದ ಟ್ರಾಫಿಕ್ ಪೋಲಿಸ್ ಮೂರು ಜನ ದ್ವಿ ಚಕ್ರ ವಾಹನದಲ್ಲಿ ಚಲಿಸುವುದನ್ನ ನಿಷೇಧಿಸಲಾಗಿದೆ ಅಂತದರಲ್ಲಿ ನೀವು ನಾಲ್ಕು ಜನ ! ಭಯ ಭೀತನಾದ ಹುಡುಗ ಹಿಂದೆ ತಿರುಗಿ ನೋಡಿ ಅಯ್ಯೋ ! ನಾವು ಇದ್ದದ್ದು ಐದು ಜನ ಇನ್ನೂಬ್ಬ ಎಲ್ಲ್ ಬಿದ್ದ ನೋಡ್ರೋ...... ಲೇ.......... 😆😆😆😆😆😆😆 ತೊಂದರೆ ಗುಂಡಾ: ಡಾಕ್ಟರ್, ನನಗೆ ಉಸಿರಾಟದ ತೊಂದರೆ ಇದೆ. ಡಾಕ್ಟರ್: ಚಿಂತೆ ಮಾಡಬೇಡ. ನಾನು ನಿಲ್ಲಿಸಿ ಬಿಡ್ತೀನಿ. 😆😆😆😆😆😆 ಸಂತಾ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಿದ್ದ. ದಾರಿಹೋಕ: ಕತ್ತೆಯೊಂದಿಗೆ ಎಲ್ಲಿ ಹೋಗ್ತಿದ್ದೀರಿ? ಸಂತಾ: (ಕೋಪದಿಂದ) ಇದು ಕತ್ತೆ ಅಲ್ಲ.. ನಾಯಿ. ಕಣ್ಣು ಕಾಣ್ಸಲ್ವ ನಿಮ್ಗೆ? ದಾರಿಹೋಕ: ನಿಮ್ಮಲ್ಲಿ ಯಾರ್ರೀ ಕೇಳಿದ್ರು.. ನಾನು ನಾಯಿ ಜತೆ ಮಾತಾಡಿದ್ದು...! 😀😀😀😀😀😀 ಒಂದು ಬೋರ್ಡ್ ಹೀಗಿತ್ತು: ಬನಾರಸ್ ಸೀರೆ- ರೂ.10 ನೈಲಾನ್ ಸೀರೆ- ರೂ.8 ಕಾಟನ್ ಸೀರೆ- ರೂ 5 ಇದನ್ನು ನೋಡಿದ ಹೆಂಗಸೊಬ್ಬಳು, ತನ್ನ ಗಂಡನ ಬಳಿ: ರೀ, ಐನೂರು ರೂಪಾಯಿ ಕೊಡಿ. ನಾನು ಐವತ್ತು ಸೀರೆ ತಗೊಂಡು ಬರ್ತೀನಿ.. ಗಂಡ: ಲೇ, "ಇಸ್ತ್ರೀ ಅಂಗಡಿ" ಕಣೇ ಅದು!! 😄😄😄😄😄😄 ದೇವರಲ್ಲಿ ಮೊರೆ ಗುಂಡ ದೇವರ ಹತ್ತಿರ : ಪರಮಾತ್ಮ , ನೀನು ಬಾಲ್ಯ ಕೊಟ್ಟೆ........ ವಾಪಸ್ ತಗೊಂಡೆ ! ಯೌವನ ಕೊಟ್ಟೆ....... ವಾಪಸ್ ತಗೊಂಡೆ ! ಐಶ್ವರ್ಯ ಕೊಟ್ಟೆ...... ವಾಪಸ್ ತಗೊಂಡೆ ! ಆದರೆ, ಹೆಂಡತಿನಾ ಕೊಟ್ಟೆ..... ಮರತೇ ಬಿಟ್ಯಾ 😆😆😆😆😆😆😆 ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಮೇಷ್ಟ್ರು ಗುಂಡನನ್ನು ಕೇಳಿದರು ಗುಂಡಾ ಕರಡಿಯ ಮೈತುಂಬಾ ಏಕೆ ಕೂದಲು ಇರುತ್ತೇ ಹೇಳು? ಗುಂಡ ಉತ್ತರ ಕೊಟ್ಟ ಕಾಡಲ್ಲಿ ಕಟ್ಟಿಂಗ್ ಶಾಪ್ ಇರಲ್ವಲ್ಲಾ ಅದಕ್ಕೆ. 😜😜😜😜😜😜 ಸಂಸಾರ ಒಂದು ಮೋಬೈಲ್ ಗಂಡ ಸಿಮ್ ಕಾರ್ಡ್ ಹೆಂಡತಿ ಕರೆನ್ಸಿ ಮಕ್ಕಳು ಕಾಲ್ಸ್ ಗಂಡು ಮಗು ಇನ್ ಕಮಿಂಗ್ ಹೆಣ್ಣು ಮಗು ಔಟ್ ಗೋಯಿಂಗ್ ಮಕ್ಕಳು ಇಲ್ಲದಿದ್ದರೆ ಮಿಸ್ಡ್ ಕಾಲ್ಸ ಗಂಡ ಸಿಟ್ಟಾದರೆ ಲೋ ಬ್ಯಾಟರಿ ಹೆಂಡತಿ ಸಿಟ್ಟಾದರೆ ಸ್ವಿಚ್ಡ್ ಆಫ್.. 😃😃😃😃😃😃 ಹೊಟ್ಟೆ ನೋವಿನಿಂದ ಬಳಲುತ್ತಿ ರೋಗಿಯನ್ನು ಕುರಿತು ಡಾಕ್ಟರ್ ಹೇಳಿದರು ನಿಮಗೆ ಗ್ಯಾಸ್ ಇದೆಯೇ? ರೋಗಿ: ಇಲ್ಲ ಅರ್ಜಿ ಹಾಕಿದ್ದೇನೆ ಈ ತನಕ ಬಂದಿಲ್ಲ.

******


ಡಾಕ್ಟರ್ - ಹುಂ.. ಏನ್ ತಿಂಡಿ ತಿಂದಿದ್ಯವ್ವಾ?

ಹುಡ್ಗಿ- ಐ ಈಟ್ ಹಂಬರ್ಗರ್, ಫ್ರೆಂಚ್ ಫ್ರೈಸ್, ಕೋಕ್ & ಕಾರ್ನ್ ಪಿಜ್ಜಾ..

ಡಾಕ್ಟರ್- ಇದು ಫೇಸ್'ಬುಕ್ ಅಲ್ಲವ್ವಾ.. ಖರೇ ಹೇಳ್ ಏನ್ ತಿಂದಿ?

ಹುಡ್ಗಿ- ರೊಟ್ಟಿ ಜೊತಿ ಬದ್ನೀಕಾಯಿ ಪಲ್ಯಾರೀ..
😂😂😂😂


******


ಡಾಕ್ಟರ್ : ನಮ್ಮ ಆಸ್ಪತ್ರೆಯ ಪ್ರಚಾರಕ್ಕಾಗಿ ಒಂದು ಒಳ್ಳೆಯ ಪಂಚ್ ಡೈಲಾಗ್ ಹೇಳಿ..

ಗುಂಡ : " ಕರ್ಕೊಂಡ್ ಬನ್ನಿ,
ಹೊತ್ಕಂಡ್ ಹೋಗಿ,
ಹಣ ನಮಗೆ,
ಹೆಣ ನಿಮಗೆ " 😂😂😂😂😂


*******

ಮಾಸ್ತರ: ರಾಮ್ಯಾ, ಹೇಳಲೇ ತತ್ತಿ ಮೊದಲ ಬಂತೋ ಏನ್ ಕೋಳಿ 🐓ಮೊದಲ ಬಂತೋ..? 

ರಾಮ್ಯಾ: ಸರ್‌ ತತ್ತಿ ಬಂತ್ರಿ..

ಮಂಜ್ಯಾ: ಸರ ಅವಂಗ ಗೊತ್ತಿಲ್ಲರೀ, ಅಂವಾ ಅಭ್ಯಾಸ ಮಾಡಿಲ್ಲರಿ, ನಾ ಹೇಳಲೆನ್ರಿ..?

ಮಾಸ್ತರ: ಹೇಳಪಾ, ನೀನ ಹೇಳ.

ಮಂಜ್ಯಾ: ಸರ ಮೊದಲ ಬೀರ್ 🍾ಬಂತರಿ,
ಆಮೇಲೆ ಶೇಂಗಾ ಬಂತರಿ, ಆಮೇಲೆ ತತ್ತಿ ಬಂತರಿ,
ಆಮೇಲೆ ಕೋಳಿ ಬಂತರಿ
ಲಾಸ್ಟಗೆ 850/- ಬಿಲ್ಲ್ ಬಂತರಿ ಸರಾ..
😀😄😜😜😂😂😂


*******


ಟೀಚೆರ್ : ಗುಂಡ " ಗಂಡ ಬೇರುಂಡ " ಎಂದರೆ ಏನು ? ವಿವರಿಸು ?
ಗುಂಡ : ಅದು ತುಂಬಾ ಸುಲುಭ ಮೇಡಂ . ಹೆಂಡತಿ ಯಿಂದ ದೂರ ಕುಳಿತು ಒಬ್ಬನೇ ಊಟ ಮಾಡುವ ಗಂಡ.

" ಗಂಡ" "ಬೇರೆ" "ಉಂಡ " 
😁😊😁😊😁😊😁😊


*******
 -ನ್ಯಾಯಾಲಯದಲ್ಲಿ-

ಜಡ್ಜ್ - ಈ ಗುಂಡನ ಎರಡೂ ಕಿವಿ ಕಟ್ ಮಾಡಿ�

ಗುಂಡ - ಬ್ಯಾಡಾ ಸ್ವಾಮಿ ಕಿವಿ ಏನಾರ ಕಟ್ ಮಾಡಿದ್ರ ನಾ ಕುರುಡ ಆಗ್ತೀನಿ..

ಜಡ್ಜ್ - ಲೇ ಹುಚ್ಚಾ ಕಿವಿ ಕತ್ತuರಿಸಿದ್ರ ಕುರುಡ ಹೆಂಗ ಆಗ್ತೀ ಲೇ..⁉

ಗುಂಡ - ಚಷ್ಮಾದ ಕಡ್ಡಿ ಏನ್ ನಿನ್ನ ಕಿವ್ಯಾಗ ಇಡ್ಲ್ಯಾ..❓
😭😵👺

*********


A small story which beautifully illustrates that what you sow, you reap. You will get the fruits as per your karma.

" Once upon a time there was a small time business man from a small village who used to sell butter in the nearby town. A big shop owner in the town was his regular customer.
The villager used to deliver every month the shop owner the required butter in 1 Kg. Blocks and in turn he used to get grocery items like sugar, pulses etc from the big shop owner.

Once the shop owner decided to weigh the butter and to his surprise every block of butter weighed 900 gms. instead of 1kg.
Next month when the villager came to supply  Butter, the shop owner was very angry at him and told to leave the shop, to this the villager replied him courteously " Sir, I am a very poor villager, I don't have enough money to even buy the required weights for weighing the butter, I usually put the 1Kg sugar you give me on one side of Weighing scale and weigh butter on another side"

This simple story very beautifully illustrates that what we give to others comes back to us. - 😊

*********

*SIX IMPORTANT GUIDELINES*

*1*.```When you are alone, mind your thoughts.```

*2*.```when you are with friends,mind your tongue```

*3*.```When you are Angry,mind your temper```

*4*.```when you are with a group,mind your Behavior.```

*5*.```When you are in trouble,mind your emotions.```

*6*.```When God starts blessing you,mind your ego.```

*********

ಮುದ್ದಾದ ಹುಡುಗಿಯು ಒಂದು ಅಂಗಡಿಗೆ ಬಂತು…

ಹುಡುಗಿ: ಅಂಕಲ್ ನಾನು ಚೆನ್ನಾಗಿದ್ದಿನಾ…?

ಅಂಗಡಿಯವನು: ತುಂಬ ಕ್ಯೂಟ್ ಆಗಿದ್ದೀಯಾ ಪುಟ್ಟ…!!

ಹುಡುಗಿ: ಆಗಿದ್ರೆ ನಾನು ದೊಡ್ಡವಳಾದ ಮೇಲೆ ನನ್ನನ್ನು ನಿಮ್ಮ ಮಗನಿಗೆ ಮದುವೆ ಮಾಡಿಕೊಳ್ತೀರಾ…??

ಅಂಗಡಿಯವನು ನಗುತ್ತಾ: ಆಯ್ತು ಪುಟ್ಟ, ನಿನ್ನನ್ನ ನನ್ನ ಮಗನಿಗೆ ಮದುವೆ ಮಾಡ್ತಿನಿ…!!

ಹುಡುಗಿ: ಆಗಿದ್ರೆ ನಿಮ್ಮ ಭಾವಿ ಸೊಸೆಗೆ ಒಂದು ಡೈರಿ ಮಿಲ್ಕ್ ಕೊಡೋಲ್ವಾ…??
ಅಂಗಡಿಯವ:😳😳😷😂😜

*********

*"ಕಣ್ಣಾ ಮುಚ್ಚೇ....*
 *ಕಾಡೇ ಗೂಡೇ....*
 *ಉದ್ದಿನ ಮೂಟೆ....*
*ಉರುಳೇ ಹೋಯ್ತು....*
*ನಮ್ಮಯ ಹಕ್ಕಿ ...*
*ನಿಮ್ಮಯ ಹಕ್ಕಿ ....*
*ಬಿಟ್ಟೇ ಬಿಟ್ಟೆ ... "*

*ಇದೊಂದು ಮಕ್ಕಳ ಆಟ*

*ನಮ್ಮ ಹಿಂದಿನವರು ಮಕ್ಕಳಾಟಗಳಲ್ಲೂ ಸಹ ಎಷ್ಟು ಚೆನ್ನಾಗಿ ರಾಮಾಯಣದ, ಮಹಾಭಾರತದ ಕತೆಗಳನ್ನು ಜೋಡಿಸಿ ಹೆಣೆಯುತ್ತಿದ್ದರು ಎನ್ನುವುದಕ್ಕೆ ಇದೊಂದು ನಿದರ್ಶನ.*

*"ಕಣ್ಣಾ ಮುಚ್ಚೆ " -*
*ಅಂದರೆ ಅಯೋಧ್ಯೆಯ ಮಹಾರಾಜ "ದಶರಥ" ಕಣ್ಣು ಮುಚ್ಚಲು....* 

*"ಕಾಡೇ ಗೂಡೆ "-*
 *ಶ್ರೀರಾಮಚಂದ್ರನಿಗೆ ಕಾಡೇ ಮನೆಯಾಯಿತು...*

*"ಉದ್ದಿನಮೂಟೆ" -*
*ಅಹಂಕಾರದಿಂದ ಉದ್ದಿನ ಬೇಳೆಯಂತೆ (ಮೂಟೆಯಂತೆ) ಉಬ್ಬಿಹೋಗಿದ್ದ ರಾವಣನನ್ನು ...*

*"ಉರುಳೇ ಹೋಯ್ತು" -*
*ಯುದ್ಧದಲ್ಲಿ ರಾಮ ಹೊಡೆದು ನೆಲಕ್ಕುರುಳಿಸಿದ.... ಅದೆ ಸೊಕ್ಕಿನ ಮೂಟೆ, ಅದೇ ಉದ್ದಿನ ಮೂಟೆ ಉರುಳೇ ಹೋಯ್ತು....*

*"ನಮ್ಮಯ ಹಕ್ಕಿ, ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ "....*

*ಸಾತ್ವಿಕನಾದ ವಿಭೀಷಣ  (ರಾವಣನ ತಮ್ಮ ) ಸೀತೆಯನ್ನು ಗೌರವಾಧರಗಳಿಂದ ತಂದು ಶ್ರೀರಾಮನಿಗೊಪ್ಪಿಸಿದ...*

*ರಾವಣ ತಿಳಿದಂತೆ ಇದು ನಮ್ಮ ಹಕ್ಕಿ ಅಲ್ಲ* , *ನಿಮ್ಮಯ ಹಕ್ಕಿ*
*ಬಿಟ್ಟು ಕಳಿಸಿಕೊಡುತ್ತಿದ್ದೇವೆ,* *ಸ್ವೀಕರಿಸಿ, ಎಂದು ರಾಮ ಲಕ್ಷ್ಮಣರನ್ನು ಪ್ರಾರ್ಥಿಸಿದ...*

*ಈ ಅರ್ಥದಲ್ಲಿ ಇಡೀ ರಾಮಾಯಣದ ಕಥೆಯನ್ನು ಈ ಮಕ್ಕಳಾಟದಲ್ಲಿ ಪೋಣಿಸಿದವರು ನಮ್ಮ ಹಿಂದಿನ ತಲೆಮಾರಿನವರು....**

*ಹೀಗಿದೆ ನೋಡಿ ಅರ್ಥ ಈ "ಕಣ್ಣಾಮುಚ್ಚಾಲೆ" ಆಟಕ್ಕೆ....*

*'ಏಗ್ದಾಗೆಲ್ಲಾ ಐತೆ' ಕೃತಿಯಲ್ಲಿ ಬೆಳಗೆರೆ ಕೃಷ್ಣಶಾಸ್ತ್ರಿಗಳು ಇದನ್ನ ವಿವರಿಸಿದ್ದಾರೆ.*


*********

1 comment:

  1. Wish you a very 26 January Happy Republic Day 2019 to all of you. January 26 is our Republic Day. We celebrate this day every year. In 1950, our India became a sovereign democratic republic and it had its own constitution.
    Source: https://www.26januaryhappyrepublicday.in/

    ReplyDelete

Share your comments here !!

Related Posts Plugin for WordPress, Blogger...