Home    Tour    Health    Music    Quote    Story    Joke


Kannada subhashita - ಕನ್ನಡ ಸುಭಾಷಿತಗಳು - ನುಡಿ ಮುತ್ತುಗಳು


ಸುಭಷಿತ

 1. ಬುಧಿವಂತರಾದವರು ಹಿಂಜರಿಯದೆ ಹತ್ತಿರ ಹೋಗಿ ಆಪ್ತನಾದವನು ಸೇರಬೆಕು
 2. ಕೆಟ್ಟದ್ದನು ನುಡಿವವರನ್ನು ಉಪಾಯವಾಗಿ ತೊರೆಯುವುದು ವಿವೇಕ
 3. ದುರಳರೊಂದಿಗೆ ಸ್ನೇಹವನ್ನು ಬಿಡು , ಉತ್ತಮರ ಹಿತವಾದಗಳನ್ನು ನೆನಪಿನಲ್ಲಿಟ್ಟುಕೊಂಡಿರು
 4. ವಿದ್ಯೆಗಿಂತ ಬೇರೆ ಐಶ್ವರ್ಯವಿಲ್ಲ , ನಿರ್ಮಲ ಸ್ವಭಾವಕಿಂತ ಬೇರೆ ತೀರ್ಥ ಸ್ನಾನವಿಲ್ಲ
 5. ನುಡಿದಂತೆ ನಡೆದುಕೊಳ್ಳದವನು ಶ್ರೇಷ್ಠನಾಗಲು ಸಾಧ್ಯವೆ ಇಲ್ಲ
 6. ಶ್ರದ್ಧೆಯೆ ಯೆಶಸ್ಸಿನ ಕೀಲಿ ಕೈ
 7. ಆದರ್ಶಗಳಿಗಾಗಿ ಬದುಕುವ ಬದುಕು ಒಂದು ತಪಸ್ಸೇ ಸರಿ
 8. ಪ್ರತಿಭೆ , ಶ್ರಮ ಮತ್ತು ಸ್ವಲ್ಪ ಅದೃಷ್ಟ ಇವುಗಳ ಮಿಶ್ರಣವೇ ಯೆಶಸ್ಸು.
 9. ಸಂಸ್ಕೃತಿಯೇ ಮಾನವನ ಮಹಾಗುರು
 10. ಜೀವನದ ಹಾದಿಯಲ್ಲಿ ಕಷ್ಟಗಳೆಂಬ ಉಬ್ಬುಗಳಿದ್ದರೂ ಸುಖವೆಂಬ ಇಳಿಜಾರುಗಳೂ ಇರುತ್ತವೆ
 11. ಧೈರ್ಯಶಾಲಿಗೆ ಮಾತ್ರ ವಿಜಯಲಕ್ಶ್ಮಿ ಒಲೆಯುತ್ತಾಳೆ , ಹೇಡಿಗಳಿಗಲ್ಲ
 12. ಹುಲಿಗೆ ಹುಲ್ಲು ತಿನ್ನುವುದನ್ನು ಕಲಿಸಬಹುದು , ಮುರ್ಖನಿಗೆ ನೀತಿಯನ್ನು ಕಲಿಸುವುದು ಕಷ್ಟ ಸಾಧ್ಯ
 13. ಪ್ರಚಂಡ ಆತ್ಮವಿಶ್ವಾಸ ನಮ್ಮನ್ನು ಸಮುದ್ರದ ಚಂಡಮಾರುತದಿಂದಲೂ ಫಾರಾಗಿಸಬಲ್ಲದು
 14. ನೀವು ಹುಟ್ಟುವಾಗ ಏನನ್ನೂ ತರುವುದಿಲ್ಲವಾದುದರಿಂದ ನಂತರ ಪಡೆದಿದ್ದೆಲ್ಲ ಲಾಭವೇ
 15. ಸೋಲು ಎಂಬುದು ಮತ್ತೊಮ್ಮೆ ಹೆಚ್ಚು ಚೈತನ್ಯದಿಂದ ಯತ್ನಿಸಲು ನೀಡಲ್ಪಡುವ ಒಂದು ಅವಕಾಶ
 16. ಮೂರ್ಖನ ಹೃದಯ ಅವನ ನಾಲಿಗೆಯಲ್ಲಿರುತ್ತದೆ , ವಿವೇಕಿಯ ನಾಲಿಗೆ ಅವನ ಹೃದಯದಲ್ಲಿರುತ್ತದೆ 

**********************
ಸೋಲಾದಾಗ ಎಲ್ಲರೂ ನಿನ್ನನು ನಿಂದಿಸಿದರೂ 
ನೀನು ನಗುತ್ತಿದ್ದರೆ 
ಎಲ್ಲರೂ ತಮ್ಮ ಆತ್ಮವಿಶ್ವಾಸವನ್ನು ಶಂಕಿಸುತ್ತಿರುವಾಗ 
ನೀನು ನಿನ್ನನೇ ನಂಬುತ್ತಿದ್ದರೆ 
ಅರಸರಲ್ಲಿಯೂ ಆಳುಗಳ ಮಧ್ಯೆಯೂ 
ನೀನು ನಿನ್ನ ತಲೆಯನ್ನು ಅತ್ಮವಿಶ್ವಸದಿಂದ ಎತ್ತಿದ್ದರೆ 
ಈ ಜಗತ್ತೇ ನಿನ್ನದಾಗುತ್ತದೆ 
ಅಂತವನೇ  ನಿಜವಾದ ಮಾನವ 
ಉಳಿದವರೆಲ್ಲರೂ ಠೊಳ್ಳು ಮಾನವರು

- ರುಡ್ಯಾರ್ಡ್ ಕ್ಲಿಪ್ಲಿಂಗ್ - ಅನುವಾದ

**********************


ಶಾಂತ ರೀತಿಯಿಂದ ಕುತಗೊಂಡು ಓದ್ರಿ..
****ನುಡಿಮುತ್ತುಗಳು****

ನೀರಿಗಿಂತ ತಿಳಿಯಾದದ್ದು ; ಜ್ಞಾನ 
ಭೂಮಿಗಿಂತ ಭಾರವಾದದ್ದು ; ಪಾಪ
ಕಾಡಿಗಿಂತ ಕಪ್ಪಾಗಿರುವುದು ; ಕಳಂಕ
ಸೂರ್ಯನಿಗಿಂತ ಪ್ರಕರವಾದದ್ದು ; ಕೋಪ
ಮಂಜಿಗಿಂತ ಹಗುರವಾದದ್ದು ; ಪುಣ್ಯ
ಗಾಳಿಗಿಂತ ವೇಗವಾಗಿರುವುದು ; ಮನಸ್ಸು

**********************************

ಯಾರನ್ನಾದರೂ ಮರೆಯುವುದಾದರೆ ಮರೆತುಬಿಡಿ, ಆದರೆ!
ಯಾರನ್ನು ಮರೆತಿದ್ದೇವೆ ಎಂಬುವುದನ್ನು ನೆನಪಿಟ್ಟುಕೊಳ್ಳಿ.

**********************************

ದೊಡ್ಡವರಾಗಲು ದಡ್ಡರಾಗಲು ವಯಸ್ಸಿನ ಅಂತರವಿರದು.

**********************************

ತಾನಾಗಿ ಬರುವುದು; ತಾರುಣ್ಯ, ಮುಪ್ಪು
ಜೊತೆಯಲ್ಲೇ ಬರುವುದು; ಪಾಪ, ಪುಣ್ಯ
ತಡೆಯಿಲ್ಲದೆ ಬರುವುದು; ಆಸೆ, ದುಃಖ
ಅನಿವಾರ್ಯವಾಗಿ ಬರುವುದು; ಹಸಿವು, ದಾಹ
ನಾಶಕ್ಕಾಗಿ ಬರುವುದು; ದ್ವೇಷ, ಸಿಟ್ಟು
ಸಮಾನಾಂತರದಲ್ಲಿ ಬರುವುದು; ಹುಟ್ಟು, ಸಾವು

**********************************

ಓಡಲು ಸಾಧ್ಯವಾಗದಿದ್ದಲ್ಲಿ
ನಿಧಾನವಾಗಿ ನೆಡೆದರೂ
ಗುರಿ ಮುಟ್ಟಬಹುದು
ಆದರೆ ಹಿಂದಿರುಗಬೇಡಿ.

**********************************

ನೀವು ನಿನ್ನೆಗಿಂತ ಈ ದಿನವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳದಿದ್ದರೆ
ನಿಮಗೆ ನಾಳೆ ಏಕೆ ಬೇಕು?

-ಅನುಭವದ ನುಡಿಗಳು

**********************************

ಪಾಪವನ್ನು ತಿರಸ್ಕರಿಸು, ಪಾಪಿಯನ್ನಲ್ಲ

-ಟಿ.ಪಿ.ಕೈಲಾಸಂ

**********************************

ಶೂದ್ರರಿಗೆ ಆದ ಅನ್ಯಾಯವನ್ನು ಸರಿಪಡಿಸಲು
ಹೋರಾಡುವವರು ಬ್ರಾಹ್ಮಣರ ವಿರುದ್ಧ ಅನಗತ್ಯವಾಗಿ 
ಬರೆಯಬೇಕಿಲ್ಲ,
ಬ್ರಾಹ್ಮಣರನ್ನು ಮೀರಿಸುವ ರೀತಿಯಲ್ಲಿ ಬೆಳೆಯಬೇಕು.

-ಕುವೆಂಪು

**********************************

ನಮಗೆ ಅವಶ್ಯಕತೆ ಇಲ್ಲದುದನ್ನು ಪಡೆದಿದ್ದರೂ ಕಳ್ಳತನ ಮಾಡಿದಂತೆ.

-ಮಹಾತ್ಮ ಗಾಂಧೀಜಿ

**********************************

ಬೆಳಕು ಎಲ್ಲಿಂದ ಬಂದರೂ ಅದಕ್ಕೆ ಸ್ವಾಗತ.

-ಮಹಾತ್ಮ ಗಾಂಧೀಜಿ

**********************************

ಜಿಪುಣ ಮತ್ತು ಉದಾರಿ ಇವರಿಬ್ಬರಿಗೂ ತಾನು ಅನುಭವಿಸಬೇಕು ಎಂಬ ಇಚ್ಛೆ ಇಲ್ಲ;
ಇಬ್ಬರೂ ಮತ್ತೊಬ್ಬರಿಗಾಗಿಯೇ ಹಣ ಕೂಡಿಡುತ್ತಾರೆ!
ಆದರೂ ಇಬ್ಬರಲ್ಲೂ ಇರುವ ವ್ಯತ್ಯಾಸ ಅಪಾರ.

-ಸುಭಾಷಿತ ಸುಧಾನಿಧಿ

**********************************

ಗಾಳಿ ಬೀಸುತ್ತಿರುವಾಗ ನೀರು ಅಲೆಗಳಿಂದ ಒಂದು ಕ್ಷಣವೂ ನಿಶ್ಚಲವಾಗಿರುವುದಿಲ್ಲ.
ಮನಸ್ಸೂ ಹಾಗೆಯೇ, ಆದ್ದರಿಂದ ಅದನ್ನು ನಂಬಬಾರದು!

-ದಕ್ಷ ಸ್ಮೃತಿ

**********************************

ಮನೆ ನಿಂತಿರುವುದು ಮಡದಿಯಿಂದ, ಅದು ಬಿದ್ದರೆ ಗಂಡನ ತಲೆ ಮೇಲೆ!

-ಬೀಚಿ

**********************************

ಸತ್ಯವನ್ನೇ ಹೇಳು; ನಂತರ ತಕ್ಷಣ ಸ್ಥಳ ಬಿಡು!

-ಯುಗೋಸ್ಲಾವಿಯಾ ಗಾದೆ

**********************************

ಯಾರು ಈ ಲೋಕದಲ್ಲಿ ಅತ್ಯಂತ ಮೂಢರೋ, ಯಾರು ಅತ್ಯಂತ ಬುದ್ಧಿಶಾಲಿಗಳೋ - 
ಅವರೇ ಸುಖವಾಗಿರುವವರು. 
ಮಧ್ಯಮ ವರ್ಗದವರು ಕ್ಲೇಶ ಪಡುತ್ತಾರೆ.

-ರಾಮಾಯಣ

**********************************

ಕುರುಡನ ಹೆಗಲ ಮೇಲೆ ಹೆಳವ(ಕುಂಟ) ಕುಳಿತು ಒಂದು ಗಾವುದ ದೂರ ನೆಡೆದ ಮಾತ್ರಕ್ಕೆ,
ಅದು ಒಬ್ಬ ಬಲಿಷ್ಠನು ದಾರಿ ನಡೆದಂತೆ ಆದೀತೇ?

-ಹರಿಹರ

**********************************

ಎಲ್ಲರ ಆಸೆಗಳನ್ನೂ ಪೂರೈಸುವ ತಾಕತ್ತು ನಮ್ಮ ನಿಸರ್ಗಕ್ಕಿದೆ, ಎಲ್ಲರ ದುರಾಸೆಗಳನ್ನಲ್ಲ.

-ಮಹಾತ್ಮ ಗಾಂಧೀಜಿ  

**********************************
Your support motivates us to do new things. Your comments help us to improve. Support us by liking our face book page and follow on twitter.

Keep posting.Friends, you can share some more sayings from your experience and keep this thread growing. We will keep updating this thread and add from your comments also.6 comments:

Share your comments here !!